×
Loading...

ಕಾನನ ಅಕ್ಟೋಬರ್ 2017 by John Doe

Book Information

Titleಕಾನನ ಅಕ್ಟೋಬರ್ 2017
Year2017-10
PPI600
Publisherವೈಲ್ಡ್ ಲೈಫ್ ಕನ್ಸರ್ವೆಷನ್ ಗ್ರೂಪ್
Languagekan
Mediatypetexts
Subjectಮಾಸಿಕ ಪತ್ರಿಕೆ;ಕನ್ನಡ ಸಾಹಿತ್ಯ;ಕಾನನ ಸಂಚಯ;Kaanana Magazine;ವಿಜ್ಞಾನ ಸಾಹಿತ್ಯ;Magazine
CollectionServantsOfKnowledge, JaiGyan
Uploaderttscribe1.bangalore
Identifierkaanana_Oct2017
Telegram icon Share on Telegram
Download Now

Description

ಕನ್ನಡದ ಏಕೈಕ ವನ್ಯವಿಜ್ಞಾನ ಕುರಿತ ಇ-ಮಾಸಪತ್ರಿಕೆ ಕಾನನ. ಮಕ್ಕಳಿಗೆ ಪರಿಸರ, ಕಾಡು, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 2011 ರ ಜನವರಿಯಿಂದ ಈ ಕಾನನ ಮಾಸಪತ್ರಿಕೆಯನ್ನು ಹೊರತರಲಾಯಿತು. ಕೆಲ ಸಂಘ-ಸಂಸ್ಥೆಗಳ ಸಹಾಯದಿಂದ ಸ್ವಲ್ಪ ದಿನಗಳು ಕಾನನದ ಮುದ್ರಣ ಪ್ರತಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಕೆಲ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಮುದ್ರಣ ಪ್ರತಿಯು ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಸದ್ಯಕ್ಕೆ ಅಂತರ್ಜಾಲದ ಮೂಖಾಂತರ ನಾಡಿನ ಜನತೆಗೆ ತಲುಪುತ್ತಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕೆಲ ಕನ್ನಡಿಗರಿಗೂ ಸಹ ತಲುಪುತ್ತಿದೆ. ಕಾನನದ ಮುಂದಿನ ಕೆಲ ಗುರಿಗಳೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ಅಭಯಾರಣ್ಯ ಕಾಡುಗಳ ಒಂದು ಕಿ.ಮೀ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಕಾನನ ಮುದ್ರಣ ಪ್ರತಿಯನ್ನು ತಲುಪಿಸುವುದು. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವುದು. ಪರಿಸರ ಆಸಕ್ತಿಯುಳ್ಳ ಯುವಕರಿಗೆ ಪರಿಸರಕ್ಕೆ ಸಂಬಂಧಪಟ್ಟ ಅವರ ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಿಕೊಡುವುದು ಮತ್ತು ಪರಿಸರಕ್ಕೆ ಸಂಬಂಧಿಸಿದ ವನ್ಯವಿಜ್ಞಾನಿಗಳ ಹೊಸ ಆವಿಷ್ಕಾರಗಳನ್ನು ಕರುನಾಡ ಜನತೆಗೆ ಕನ್ನಡದಲ್ಲಿ ತಿಳಿಸಲು ಯತ್ನಿಸುವುದು. https://indiawcg.org/kaanana.html