×
Loading...

ಅನನ್ಯ ಅನುವಾದಕ - ಅಹೋಬಲ ಶಂಕರ by ಎ. ಪಿ. ಮಾಲತಿ

Book Information

Titleಅನನ್ಯ ಅನುವಾದಕ - ಅಹೋಬಲ ಶಂಕರ
Creatorಎ. ಪಿ. ಮಾಲತಿ
Year2014
PPI300
Pages94
Publisherಹೇಮಂತ ಸಾಹಿತ್ಯ
Languagekan
Mediatypetexts
Subjectಕನ್ನಡ ಸಾಹಿತ್ಯ;ಕಾದಂಬರಿ;ಎ. ಪಿ. ಮಾಲತಿ ಸಂಚಯ
CollectionServantsOfKnowledge, JaiGyan
Uploaderttscribe1.sok
Identifierunset0000unse_q3p0
Telegram icon Share on Telegram
Download Now

Description

ಶ್ರೀಮತಿ ಎ.ಪಿ.ಮಾಲತಿ ಅವರು ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯರಂಗದಲ್ಲಿ ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರ, ವಿಚಾರ ಸಾಹಿತ್ಯ ಕೃತಿಗಳಿಂದ ಕ್ರಿಯಾಶೀಲರಾದವರು. ಅರ್ಧಾಂಗಿ ಆಘಾತ, ಅನಿಶ್ಚಯ, ಅತೃಪ್ತೆ, ದೇವ, ತಿರುಗಿದ ಚಕ್ರ, ಮಂದಾರ, ಹಸಿರು ಚಿಗುರು, ಬದಲಾಗದವರು, ಕಾಡು ಕರೆಯಿತು, ವಕ್ರರೇಖೆ, ಅಲೋಕ ಮುಂತಾದ- ಇಪ್ಪತ್ತು ಕಾದಂಬರಿಗಳು-, ಸಂಜೆಬಿಸಿಲು ಮತ್ತು ವಸಂತದ ಹೂವುಗಳು - ಸಣ್ಣ ಕಥಾಸಂಕಲನ, ಸುಖದಹಾದಿ, ದಿವ್ಯಪಥ, ಸಂತೋಷದ ಹುಡುಕಾಟ, ಮಹಿಳೆ-ಪರಿವರ್ತನೆಯ ಹಾದಿಯಲ್ಲಿ, ಮಕ್ಕಳ ಪಾಲನೆ ಮುಂತಾದ - ಒಂಬತ್ತು ಲೇಖನ ಪುಸ್ತಕಗಳು, ಕಾರುಣ್ಯನಿಧಿ ಶ್ರೀಮಾತಾ ಶ್ರೀ ಶಾರದಾ ದೇವಿ, ಅನನ್ಯ ಅನುವಾದಕ ಅಹೋಬಲ ಶಂಕರ ಜೀವನಚರಿತ್ರೆಗಳು,- “ಕಾದಂಬರಿ ರಚನೆಯಲ್ಲಿ ಸ್ಟ್ರಕ್ಚರಲ್ ಮೆಥೆಡ್”-ಡಿಪ್ಲೋಮಾ ಪ್ರಬಂಧ, ಅಂಜನ ಕಾದಂಬರಿ-ಸಂಸ್ಕೃತಕ್ಕೆ ಅನುವಾದ, ಸ್ಮೃತಿಯಾನ ಆತ್ಮಚರಿತ್ರೆ ಇವರ ಪ್ರಮುಖ ಕೃತಿಗಳು. ಮಂದಾರ ಈ.ಟಿ.ವಿ ಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿವೆ. ಹಲವಾರು ಸಣ್ಣ ಕಥೆಗಳು ಮಲೆಯಾಳ, ತೆಲುಗಿಗೆ ಅನುವಾದಗೊಂಡು, ರೇಡಿಯೋ ನಾಟಕವಾಗಿ ಪ್ರಸಾರವಾಗಿವೆ. ಇವರ ಸುಖದ ಹಾದಿ ಚಿಂತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ೨೦೦೬ ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಹಿತ್ಯ ಸಾಧನೆಗೆ ಗೌರವ ಪ್ರಶಸ್ತಿ. ನಿರಂಜನ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಸೂರಿ ವೆಂಕಟರಮಣ ಶಾಸ್ತ್ರೀ ಕರ್ಕಿ ಪ್ರಶಸ್ತಿ, ಭಾರ್ಗವ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಅನೇಕ ಕಥೆ ಕಾದಂಬರಿಗಳಿಗೆ ನಿಯತಕಾಲಿಕ ಪತ್ರಿಕೆಗಳು ಏರ್ಪಡಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಲಭ್ಯವಾಗಿದೆ. ಇವರ ಸಾಹಿತ್ಯದಲ್ಲಿ ಸಾಮಜಿಕ ಕಳಕಳಿ, ಮನೋವೈಜ್ಞಾನಿಕ ಚಿಂತನೆ, ಮಾನವ ಪರ ಗ್ರಹಿಸುವ ಶಕ್ತಿ, ಕ್ರೌರ್ಯ, ಹತಾಶೆ ಸೋಲಿನಲ್ಲೂ ಉತ್ಸಾಹದ ಜೀವನ್ಮುಖಿ ಧೋರಣೆ, ಸ್ತ್ರೀ ಪರ ಕಾಳಜಿ ಎದ್ದು ಕಾಣುವ ಅಂಶಗಳು. ಮಾಲತಿಯವರ ಹುಟ್ಟೂರು ಉತ್ತರಕನ್ನಡ ಜಿಲ್ಲೆ ಭಟ್ಕಳ. ತಂದೆ ಗಣೇಶ ಕೃಷ್ಣ ಭಟ್ಟ, ತಾಯಿ ಕಾವೇರಿ. ಪತಿ ಎ.ಪಿ.ಗೋವಿಂದಭಟ್ಟ. ಶೈಕ್ಷಣಿಕ ವಿದ್ಯಾಭ್ಯಾಸ ಹೊನ್ನಾವರ ಮತ್ತು ಧಾರವಾಡದಲ್ಲಿ. ವಿವಾಹದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ಮರಿಕೆಯಲ್ಲಿ. ಕೃಷಿ ಜೀವನ. ಮಾವ ಎ.ಪಿ.ಸುಬ್ಬಯ್ಯನವರು ಆ ಕಾಲದ ಜಮೀನ್ದಾರರು. ಇಂಗ್ಲೀಷನ ಶ್ರೇಷ್ಟ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದವರು. ಅತ್ತಿಗೆ ಗಂಡ ಜಿ.ಟಿ.ನಾರಾಯಣ ರಾವ್ ವಿಜ್ಞಾನ ಲೇಖಕರು. ಮಗ ಡಾ.ಎ.ಪಿ. ರಾಧಾಕೃಷ್ಣ ಭೌತಶಾಸ್ತ್ರದ ಪ್ರಾಧ್ಯಾಪಕ, ವಿಜ್ಞಾನ ಲೇಖಕ, ಮಗಳು ಲಲಿತಾ ಎಂಎಸ್.ಸಿ ಎಂ.ಎಡ್ ಪದವೀಧರೆ, ಮೈಸೂರಲ್ಲಿ ಸ್ವಂತದ ಉದ್ಯಮಿ. ಮೂವರು ಮೊಮ್ಮಕ್ಕಳು. ದೊಡ್ಡ ನಗರದಿಂದ ಪುತ್ತೂರಿನ ಹಳ್ಳಿಗೆ ಬಂದು ಸುದೀರ್ಘ ಸಾಹಿತ್ಯ ಕೃಷಿಯಲ್ಲಿ ನಿರತರಾದ ಮಾಲತಿಯವರು ಕೃಷಿ ಜೀವನ ಮತ್ತು ಸಾಹಿತ್ಯ ಕೃಷಿಯ ಸಮನ್ವಯ ಸಾಧಕಿ. ಸಂಚಿ ಫೌಂಡೇಶನ್ (https://sanchifoundation.org) ಹಾಗೂ ಸಂಚಯದ (https://sanchaya.org) ವತಿಯಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ಸ್, ಬೆಂಗಳೂರಿನಲ್ಲಿ ಪಬ್ಲಿಕ್ ರಿಸೋರ್ಸ್. ಓಆರ್ ಜಿ - ಜ್ಞಾನದ ಸೇವಕರು (Servants Of Knowledge) ಸಮುದಾಯ ಸಹಭಾಗಿತ್ವದ ಕೆಲಸದಡಿಯಲ್ಲಿ, ಈ ಪುಸ್ತಕವನ್ನು ಡಿಜಿಟಲೀಕರಿಸಲಾಗಿರುತ್ತದೆ. ಶ್ರೀಮತಿ ಎ. ಪಿ. ಮಾಲತಿ ಅವರನ್ನೂ, ಪಬ್ಲಿಕ್ ರಿಸೋರ್ಸ್. ಓಆರ್ ಜಿ, ಐ.ಎ.ಎಸ್.ಸಿ, ಸಂಚಯ ಹಾಗೂ ಸಂಚಿ ಫೌಂಡೇಷನ್ ಸಂಸ್ಥೆಗಳನ್ನು ಈ ಕಾರ್ಯದಲ್ಲಿ ನೆರವಾಗಿದ್ದಕ್ಕೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.